Monday, July 6, 2015

ನನ್ನ ಮನೆದೇವರಾದ ಶ್ರೀ ಕರೇಸಿಧ್ದೇಶ್ವರನ ಶಿಷ್ಯ ಮಹಿಮಾಂತಕ ಮಾಳಿಂಗರಾಯನ ಪವಾಡ



                               "ಹುಲಿಜಂತಿ ಮಾಳಿಂಗರಾಯನ ಕಥೆ"




ಹುಲಿಜಂತಿ ಮಾಳಿಂಗರಾಯ.. ಕುರುಬ
ಜನಾಂಗದ ಮೂಲ ಪುರುಷರಲ್ಲಿ ಒಬ್ಬರು..
ಮಾಳಿಂಗರಾಯ ಮೂಲತಃ ಕುರುಬ ಜನಾಂಗಕ್ಕೆ
ಸೇರಿದವರಾದ್ದರಿಂದ ಕುರಿ ಕಾಯುವುದೇ ಅವರ
ಕಾಯಕವಾಗಿತ್ತು... ಅವರು ಮಹಾನ್ ಶಿವಭಕ್ತರೂ
ಆಗಿದ್ದರು..
ಒಮ್ಮೆ ಶಿವಭಕ್ತಿಯನ್ನು ಪರೀಕ್ಷಿಸಲು ಸಾಕ್ಷಾತ್
ಪರಮೇಶ್ವರನೇ ಧರೆಗಿಳಿದು ಬಂದನು..
ಮಾಳಿಂಗರಾಯ ನೂರಾರು ಕುರಿಗಳೊಂದಿಗೆ
ಬಯಲು ಪ್ರದೇಶದಲ್ಲಿಯೇ ವಾಸ ಮಾಡ್ತಿದ್ದ..
ಇದನ್ನು ಕಂಡ ಶಿವನು “ಏನಪ್ಪಾ.. ನೀನು
ಕುರಿಗಳನ್ನೆಲ್ಲಾ ಹೀಗೆ ಬಯಲಲ್ಲಿ ಕಟ್ತೀಯಲ್ವಾ..
ಅಕಸ್ಮಾತ್ ಮಳೆ ಬಂದ್ರೆ ಏನ್ ಮಾಡ್ತೀಯ..??
ಅಂತ ಕೇಳಿದನಂತೆ.. ಆಗ ಮಾಳಿಂಗರಾಯ “ಮಳೆ
ಬರೋದಕ್ಕೆ ಇನ್ನು ಮೂರು ತಿಂಗಳು ಬೇಕು..
ಅಲ್ಲಿವರೆಗೂ ಮಳೆ ಬರೋದಿಲ್ಲ.. ಅಷ್ಟರಲ್ಲಿ ನಾನು
ನಮ್ಮೂರು ಸೇರಿಬಿಡುತ್ತೇನೆ” ಅಂತ
ಹೇಳಿದ್ನಂತೆ.. “ಶಿವ ಮಳೆ ಯಾವಾಗ್ ಬೇಕಾದ್ರೂ
ಸುರಿಸಬಹುದಪ್ಪಾ,, ಹೇಳೋಕ್ ಆಗಲ್ಲ”... ಅಂತ
ಮಾರುವೇಷದಲ್ಲಿದ್ದ ಪರಶಿವನು ಹೇಳುತ್ತಾನೆ..
ಆಗ “ಶಿವನು ಮನಸ್ಸು ಮಾಡಿದ್ರು ಅದು ಆಗಲ್ಲ..
ನಾನು ಹೇಳಿದ ಸಮಯದಲ್ಲೇ ಮಳೆ ಆಗುತ್ತೆ”
ಅಂತ ಹೇಳಿದನಂತೆ ಮಾಳಿಂಗರಾಯ..
ಈ ಮಾತು ಕೇಳಿ ಶಿವನಿಗೆ ಕೋಪ ಬಂತು..
ಮಳೆಯನ್ನು ಸುರಿಸಿ ಮಾಳಿಂಗರಾಯನ ಊಹೆಯನ್ನು
ಸುಳ್ಳು ಮಾಡಬೇಕೆಂದು ನೇರವಾಗಿ
ಕೈಲಾಸಕ್ಕೆ ಬಂದ.. ಆದರೆ ಕೈಲಾಸದಲ್ಲಿ ಶಿವನು
ಇಲ್ಲದೇ ಇರೋದ್ರಿಂದ ವರುಣದೇವನೂ
ಸೇರಿದಂತೆ ಎಲ್ಲಾ ದೇವತೆಗಳು ದಿಕ್ಕಾಪಾಲಾಗಿ
ಹೋಗಿದ್ದರು.. ಅವರೆಲ್ಲರನ್ನೂ ಕೈಲಾಸಕ್ಕೆ ಕರೆಸಿ..
ಒಂದು ಗೂಡಿಸಿ ಮಳೆಯನ್ನು ಸುರಿಸುವಷ್ಟರಲ್ಲಿ
ಮೂರು ತಿಂಗಳುಗಳೇ ಕಳೆದು ಹೋದವು..
ಅಷ್ಟರಲ್ಲಿ ಮಾಳಿಂಗರಾಯ ಕುರಿ ಹಿಂಡಿನೊಂದಿಗೆ
ತನ್ನ ಮನೆ ಸೇರಿದ್ದ.. ಇದನ್ನು ಅರಿತ ಶಿವನು
“ಶಿವನಿಗಿಂತ ಶಿವಭಕ್ತನಿಗೆ ಹೆಚ್ಚು ಶಕ್ತಿ ಇದೆ..” ಎಂದು
ಅರಿತುಕೊಂಡು ಸುಮ್ಮನಾದ.. ಶಿವನ
ಅಂತರಾತ್ಮವನ್ನು ಶಿವನಿಗಿಂತ ಹೆಚ್ಚಾಗಿ
ಶಿವಭಕ್ತರಿಗೇ ಹೆಚ್ಚು ತಿಳಿದಿರುತ್ತದೆ” ಎಂಬುದು
ಹುಲಿಜಂತಿ ಮಾಳಿಂಗರಾಯರು
ತೋರಿಸಿಕೊಟ್ಟಿದ್ದಾರೆ.

ಕೃತಿ ಪುರಾಣಗಳ ಆದಾರ ಮೇಲೆ

ಮಾಯಪ್ಪಾ ಕರೆಪ್ಪಾ ಲಠ್ಠೆ  ಸಾಮನ್ಯ ಕುರಿ ಕಾಯುವ ಕುರುಬ
Mo. 9901017401
        9980849401
Email- mayappalatte@gmail.com
ಊರು. ಬಸ್ತವಾಡ
ತಾ. ರಾಯಬಾಗ ಜಿ.ಬೆಳಗಾವಿ

Sunday, August 24, 2014

ಮರೆಯಾಗಿ ಹೋಗುವ ಕ್ಷಣಗಳ ಸಣ್ಣ ನೆನಪು. ........


♡ನೆನಪು ಅನ್ನುದು
ತುಂಬ
ಇರುತ್ತೆ .ಮರೆವು
ಅನ್ನುದು ಬೇಗ
ಬರುತ್ತೆ .ನಾಳೆ
ಅನ್ನುದು ಇದ್ದೆ
ಇರುತ್ತೆ .ಆದರೆ ನಿನ್ನೆ
ಆನ್ನುದು ಮತ್ತೆ
ಬರೋದೆ ಇಲ್ಲಾರೀ.... ♡♥







Saturday, October 12, 2013

ಕುರುಬ

ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.

ಇತಿಹಾಸ ಪೂರ್ವ

ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು.


ಭಾರತ ಇತಿಹಾಸ

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು. ಮೌರ್ಯರ ಮೊದಲ ದೊರೆ ಚಂದ್ರಗುಪ್ತನು ಕುರಿಗಾಹಿಯಾಗಿದ್ದು, ಆಗಿನ ನಂದ ದೊರೆಗಳ ವಿರುದ್ಧ ಸಿಡಿದೆದ್ದು ತನ್ನದೇ ಆದ ಸಾಮ್ರಾಜ್ಯವನ್ನು ಚಾಣಕ್ಯನ ಸಹಾಯದಿಂದ ಕಟ್ಟಿದನು. ಇದರು ಗುರುತಾಗಿ ಭಾರತ ಸರ್ಕಾರವು ನವ ದೆಹಲಿಯಾ ಪಾರ್ಲಿಮೆಂಟ್ ಕಟ್ಟಡದ ೫ನೆ ಮಹಾದ್ವಾರದ ಬಳಿ ಚಂದ್ರಗುಪ್ತನ ಪುತ್ಥಳಿಯನ್ನು ಸ್ಥಾಪನೆ ಮಾಡಿ , ಅದರ ಕೆಳಗೆ " ಕುರಿ ಕಾಯುವ ಹುಡುಗ ತಾನು ಕಟ್ಟಲಿರುವ ಸಾಮ್ರಾಜ್ಯದ ಬಗ್ಗೆ ಕನಸು ಕಾಣುತಿರುವುದು" ಎಂದು ಬರಿಯಲಾಗಿದೆ. ನಂತರ ಕುರುಬ ಗೌಡರು ರಾಷ್ಟ್ರಕೂಟ, ಪಲ್ಲವ, ಹೊಯ್ಸಳ, ದೇವಗಿರಿಯ ಯಾದವ, ಹೊಲ್ಕರ್ ರಾಜರು ಮತ್ತು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದರು.

 

ಇತರೆ ಹೆಸರುಗಳು

ಕುರುಬ, ಆರೆಗುಲ್ಲ, ಗೌಡ , ಕುರುಮ , ಕುರುಂಬ , ದನಗರ್, ಗೊಲ್ಲ , ಯಾದವ , ಅಹಿರ್ , ಹಾಲುಮತ , ಇಡೆಯರ್, ಪಾಲ, ಗದ್ದಿ, ಬಕರ್ವಾಲ್ , ನಾಯ್ಕರ್ , ಹೆಗ್ಗಡೆ , ಅಂಡರ್, ಮಲದರಿ , ಗೊರವರ್ , ದೊಡ್ಡಿ ಗೌಡ , ಗಡರಿ.ಅನೆಕುರುಬ,


ಕರ್ನಾಟಕದ ಕುರುಬ ಗೌಡರು

ಕರ್ನಾಟಕದ ೩ನೆ ಅತಿ ದೊಡ್ಡ ಸಮುದಾಯ, ಕುರುಬ ಗೌಡ ಸಮುದಾಯ. ಕರ್ನಾಟಕದ ಪ್ರಮುಖ ಸಾಮ್ರಾಜ್ಯಗಳನ್ನು ಕಟ್ಟಿದವರು ಕುರುಬ ಗೌಡರು. ರಾಷ್ಟ್ರಕೂಟ , ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯ ಪ್ರಮುಖವಾದವು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಿಂದ ದಕ್ಷಿಣ ಭಾರತದಲ್ಲಿ ಹಿಂದೂ ಸಂಸ್ಕೃತಿ ಉಳಿಯುವಂತೆ ಆಯಿತು, ಹಿಂದೂಸಂಸ್ಕೃತಿ ಉಳಿಯಲು ಕಾರಣವಾದವರು ಕುರುಬ ಗೌಡ ಸಹೋದರರಾದ ಹಕ್ಕ ರಾಯ ಮತ್ತು ಬುಕ್ಕ ರಾಯ.


ಸಂಪ್ರಯದ

ಕುರುಬ ಗೌಡರು ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಪೂಜಿಸಿ ಕೊಂಡು ಬಂದವರು, ಕಲ್ಲನ್ನು ಪೂಜಿಸುವುದು ಪುರಾತನವಾದ ಸಂಪ್ರದಾಯ , ಅದೇ ಸಂಸ್ಕೃತಿ ಬರ ಬರುತ್ತಾ ಶಿವ ಲಿಂಗ ಪೂಜೆಯಾಗಿ ಮಾರ್ಪಟ್ಟಿತು.ಶ್ರೀ ಜಗದ್ಗುರು ರೇವಣ ಸಿದ್ದೇಶ್ವರರು, ಮತ್ತು ಶ್ರೀ ಜಗದ್ಗುರು ಶಾಂತಿಮಯ್ಯ ಒಡೆಯರು ಈ ಜನಾಂಗದ ಆದಿ ಗುರುಗಳು. ಇವರು ಶಿವನ್ನನ್ನು ಬೀರೇಶ್ವರ , ಮೈಲಾರಲಿಂಗ , ಮಾದೇಶ್ವರ , ಮಲ್ಲಪ್ಪ , ಮಲ್ಲಿಕಾರ್ಜುನ ಮುಂತಾದ ಹೆಸರಿನಲ್ಲಿ ಪುಜಿಸುತಾರೆ. ಎಲ್ಲಮ್ಮ , ಭೀಮವ್ವ , ಚೌಡಮ್ಮ ಮುಂತಾದ ಹೆಸರಿನಲ್ಲಿ ಶಕ್ತಿ ದೇವಿಯನ್ನು ಪುಜಿಸುತಾರೆ. ಕರ್ನಾಟಕ ಮತ್ತು ಅಂದ್ರ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಬೀರೇಶ್ವರ ಅಥವಾ ಮೈಲಾರಲಿಂಗೇಶ್ವರ ದೇವಾಲಯವಿರುತ್ತೆ , ಈ ದೇವಾಲಯಗಳ ಪೂಜಾರಿಗಳು ಕುರುಬ ಗೌಡರಗಿರುತ್ತಾರೆ.

ಕುರುಬ ಗೌಡರ ಹಬ್ಬಗಳು


ಕುರುಬ ಗೌಡರ ಉಪ ಜಾತಿಗಳು


ಕುರುಬ ಗೌಡರ ಇತಿಹಾಸ ಕತೆಗಳು

ಕುರುಬ ಗೌಡರ ಜನಪದ ಕಲೆಗಳು

ಕುರುಬ ಗೌಡರ ಧರ್ಮಕ್ಷೇತ್ರಗಳು

ಕುರುಬ ಗೌಡ ಇತಿಹಾಸ ಪುರುಷರು


ಕುರುಬ ಗೌಡರು ಇಂದು

ಅನಾದಿ ಕಾಲದಿಂದಲೂ ಹಲವಾರು ಕಸಬುಗಳನ್ನು ಮಾಡಿಕೊoಡಿದ್ದ ಕುರುಬ ಗೌಡರು , ವಿದ್ಯಾಬ್ಯಾಸದ ಕಡೆ ಹೆಚ್ಚು ಗಮನ ಕೊಡಲಿಲ್ಲ. ಪಾಳೆಗಾರರು, ನಾಯಕರು , ಸಾಮ್ರಾಜ್ಯ ಶಾಹಿಗಳು , ಸಾಮಂತ ರಾಜರು, ಸೈನಿಕರು ಆಗಿದ್ದ ಕುರುಬ ಗೌಡರು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕಡೆಗನಿಸಲ್ಪಟ್ಟರು ಮತ್ತು ತುಂಬಾ ಹಿಂದುಳಿದರು , ಹೊಸ ರಾಜಕೀಯ ಬೆಳವಣಿಗೆಗಳು ಅವರ ಅರಿವಿಗೆ ಬರುವುದು ನಿದಾನವಾಹಿತು. ಬ್ರಿಟಿಷರ ವಿರುದ್ದ ಹೋರಾಡಿದ ಹೋಳ್ಕರ್ ಮಹಾರಾಜರು ಹಾಗು ಸಂಗೊಳ್ಳಿ ರಾಯಣ್ಣನಂತ ದೇಶ ಪ್ರೇಮಿಗಳ ಕಾರಣ, ಬ್ರಿಟಿಷರು ಕುರುಬರನ್ನು ರಾಜ್ಯ ಆಡಳಿತದಿಂದ ದೂರವಿಟ್ಟರು, ಉತ್ತರ ಕರ್ನಾಟಕದ ಮುಸಲ್ಮಾನ ದೊರೆಗಳು ತಮ್ಮ ವಿಜಯನಗರದ ದ್ವೇಷದಿಂದ ಕುರುಬರನ್ನು ಹಿಂಸಿಸಿದರು. ಆದರೆ ಭಾರತದ ಸ್ವತಂತ್ರದ ನಂತರ ಅವರಿಗೆ ಸಿಗಬೇಕಾದ ಸೌಲಬ್ಯಗಳು ಸಿಗತೊಡಗಿದವು ಆಗು ಅವರು ವಿದ್ಯಾಬ್ಯಾಸ ಮಾಡಲು ಅನುವುಮಾಡಿಕೊಟ್ಟಿತು. ಬೇರೆ ಸಮುದಾಯಗಳಿಗೆ ಹೋಲಿಸಿದರೆ ಕುರುಬರು ವಿದ್ಯಾಬ್ಯಾಸದಲ್ಲಿ ಮುಂದೆ ಬರುವುದು ತುಸು ನಿದಾನವಾದರು ತುಂಬಾ ಮುನ್ನಡೆದಿದ್ದಾರೆ . ಮತ್ತೆ ಕರ್ನಾಟಕವನ್ನು ಆಳಿ ವಿಜಯನಗರದ ಸುವರ್ಣ ಯುಗಕ್ಕೆ ಕೊಂಡೊಯುವ ಕಾಲ ಬಂದಿದೆ ಎಂದು ಹಲವರ ಬಾವನೆ. ರವಿ ನಾಗರಜ್ (ಕೆರೆಬನ್ದಿ)ದೊದ್ದಕರದೆ ಹಾಸನ





ಡೊಳ್ಳು ಕುಣಿತ

ಡೊಳ್ಳು ಕುಣಿತ - ಒಂದು ಜನಪದ ಹಾಗೂ ಶಾಸ್ತ್ರೀಯ ಕಲೆ, ನೃತ್ಯ. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂಬ ಹೆಸರು. ಡೊಳ್ಳು ಬೀರೇಶ್ವರ ದೇವರಿಗೆ ಅತಿ ಪ್ರಿಯವಾದ ವಾದ್ಯ. ಎಲ್ಲ ಬೀರೇಶ್ವರ ದೇವರ ಗುಡಿಗಳಲ್ಲಿ ಒಂದು ಡೊಳ್ಳನ್ನು ಕಟ್ಟಿರುತ್ತಾರೆ. ಕುರುಬ ಗೌಡ ಜನಾಂಗದ ಜನರು ಡೊಳ್ಳು ಕುಣಿತ ಮಾಡುತ್ತಾ ಬೀರೇಶ್ವರ ದೇವರನು ಪೂಜಿಸುತ್ತಾರೆ. ಕುಣಿತದ ಜೊತೆ ಹಾಲುಮತ ಕುರುಬ ಪುರಾಣವನ್ನು ಹಾಡುತ್ತಾರೆ. ಡೊಳ್ಳು ಕುಣಿತ ಮಾಡಲು ತುಂಬಾ ಶಕ್ತಿ ಮತ್ತು ಧೈರ್ಯ ಬೇಕು, ತಮ್ಮ ಯುದ್ಧ ಕಲೆಗಳಲ್ಲಿ ಇದು ಒಂದು ಕುರುಬರು ಬಾವಿಸುತಾರೆ, ಕುರುಬರು ಹಿಂದಿನ ಕಾಲದಲ್ಲಿ ಸೈನಿಕರು, ನಾಯಕರು ಆಗಿದ್ದರೆಂದು ಈ ನೃತ್ಯ ತೋರಿಸುತ್ತದೆ. ಕುರುಬ ವಂಶಸ್ಥರು ಪಾರಂಪರಿಕವಾಗಿ ಈ ನೃತ್ಯವನ್ನು ತಲತಲಾಂತರದಿಂದ ಮಾಡಿಕೊಂಡು ಬಂದವರು. ಜನಪದದಲ್ಲೇ ಉಳಿದುಕೊಂಡ ಈ ಕಲೆಗೆ ಪ್ರೋತ್ಸಾಹ ನೀಡಲು ಇತ್ತೀಚೆಗೆ ಸಾಮಾನ್ಯವಾಗಿ ದಸರಾ ಸಂಭ್ರಮದಲ್ಲಿ, ವಸಂತಹಬ್ಬ ಹಾಗೂ ಇತರೆ ಸಂದರ್ಭಗಳಲ್ಲಿ ಇತರೆ ಕಾರ್ಯಕ್ರಮಗಳೊಂದಿಗೆ ಡೊಳ್ಳು ಕುಣಿತದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮ ನಡೆದರೂ ಅಲ್ಲಿ ಡೊಳ್ಳು ಕುಣಿತ ಇರುತ್ತದೆ




Friday, October 11, 2013

 

 

 

 

 

 

ಪುಣ್ಯಪುರುಷ ಸಂಗೊಳ್ಳಿ ರಾಯಣ್ಣ


ಚಿತ್ತಗೊಟ್ಟ ಕೇಳರಿನ್ನ ಕಿತ್ತೂರ ನಾಡಾನ ಸುದ್ದಿ
ಕತ್ತಿ ಹಿರದ ನಿತ್ತಿದಾನ ಲಡಾಯಕ
ಸಂಗೊಳ್ಳಿ ರಾಯಣ್ಣನಂಥ ಬಂಟ ಇದ್ದಿರಬೇಕ
ತಾಯಿ ಕೆಂಚವ್ವ ತಂದಿ ಹಳಬ ಭರಮನಾಯಕ ||
ಜಾತಿಯಿಂದ ಹಾಲಮತ ಛಾತಿಲಿಂದ  ಶಮರಂತ
ಸೋತ ನಡಿಲಿಲ್ಲ ಪ್ರಾಣ ಹೋಗೂತನಕ
ಬಂಟರಿದ್ದರಿರಬೇಕ ಇಂಥ ಪುಂಡ ಪ್ರಖ್ಯಾತ ||
ಮಲಪುರಿ ಹೊಳಿಯೊಳಗ ಹುಟ್ಟಿತ ಕದನದ ಬ್ಯಾಗಿ
ಕುಲಕರ್ಣಿ ಬಾಳಪ್ಪ ಅಂದ ದೊತ್ರಾ ಒಗದ ಕೊಡಬೇಕ
ಹಳಬ ಆದ ಮ್ಯಾಲ ಅಲಕ್ಷತನ ನಿನಗ್ಯಾಕ
ಚಾಕ್ರಿಮಾಡೋದಾದರ ಹೇಳಿದ್ದನೆಲ್ಲಾ ಕೇಳಬೇಕ ||
ಇಷ್ಟಕೇಳಿ ರಾಯಣ್ಣ ನಿಷ್ಠುರದಿಂದ ಹೇಳತಾನ
ಹೆಂತಾ ಕೆಟ್ಟ ಮಾತನಾಡಿದೆಪ್ಪ ಕೇಡಗಾಲಕ್ಕ
ನಾಚಿಕೆ ಬರಲಿಲ್ಲೇನೋ ಹಿಂತಾ ಕೆಲಸ ಹೇಳುದಕ ||
ಎಂಟದಿನ ಆಗಿದ್ದಿಲ್ಲ ಸಿಟ್ಟ ಇತ್ತ ಕುಲಕರ್ಣಿಗೆ
ಗಂಟ ಬಿದ್ದ ಸರಕಾರಿ ಪಾಳೇಕ
ರಾಯಣ್ಣ ಹೊಂಗಲಕ ಹ್ವಾದ ಹೋರಿಗಳನ ಮಾರೂದಕ
ಬಾಳಣ್ಣ ಕೆಂಚವ್ವನ್ನ ಕರಿಸಿದಾನೊ ಚಾವಡಿತನಕ ||
ಮಾಡಿದಾನ ಚೀಮಾರಿ ಡುಬ್ಬದಮ್ಯಾಲಿ ಕಲ್ಲಹೇರಿ
ಎಲ್ಲಿಹೋಗತಿ ಸದ್ದೆ ಪಾಳೆ ಕೊಡಬೇಕ
ನಿನ್ನ ಮಗಾ ರಾಯಾಗ ಬಂದತೀಗ ಬಾಳಸೊಕ್ಕ ||
ಹೋರಿ ಮಾರಿದ ಹಣಾತಂದ ಮಾರಿಮ್ಯಾಗ ಒಗದ
ತಾಯಿ ದುಬ್ಬದ ಮ್ಯಾಲಿನ ಕಲ್ಲ ಇಳಿವ್ಯಾನ ನೆಲಕ
ಬಾಳ್ಯಾ ನಿನ್ನ ಚೆಂಡ ಕಡದ ಇಡತೇನಂದ ಕಡಿಯಾಕ
ಕುತಿಗಿ ಹಿಡಿದ ಕತ್ತಿ ಕೈ ಎತ್ತಿ ಮ್ಯಾಲಕ್ಕ ||
ಗಾಬ ಆಗಿ ಬಾಳಣ್ಣ ಬಾಯೊಳು ಹಲ್ಲಕಚ್ಚಿ
ಜೀವದಾನಾ ಬೇಡಿದಾನ ಬಿದ್ದಪಾದಕ
ನಿನ್ನ ಮಗಾ ಆಗಿ ಇರತೇನಪ್ಪಾ ಕಡಿತನಕ ||
ದಯಾಬಂತ ರಾಯಣ್ಣಗ ಜೀವದಾನಾ ಕೊಟ್ಟಿದಾನ
ಕುಲಕರ್ಣಿ ಕೊಟ್ಟಿ ರಿಪೋರ್ಟ ಬರದ ಕಂಪನಿ ಸರಕಾರಕ್ಕ
ವಾರಂಟ ಹುಟ್ಟೀತ ರಾಯಣ್ಣನ ಹಿಡಿಯೂದಕ್ಕ
ಸಂಪಗಾಂವ ಬೀಡಿ ಕಚೇರಿ ಸುಟ್ಟಿದಾನ ಆ ಕ್ಷಣಕ ||
ಬಲ್ಲಿದ ಬಂಟರ ಹಿಂಡ ಒಪ್ಪುವಂಥಾ ಒಣಕಿ ದಂಡ
ಕೂಡಿಸಿಕೊಂಡ ರಾಯಣ್ಣ ಬೆಂಬಲಕ
ಬೆನ್ನ ಹತ್ತೀತ ಬ್ರಿಟೀಷ ದಂಡ ಹಿಡಿಯೋದಕ ||

ಕೂಡುಕೊಂಡ ಹ್ವಾದ್ರ ಮಲ್ಲಾಡಕ ಬಾಳಗುಂಡ ಸ್ಥಳಕ
ಇಳಕೊಂಡಾರ ಸ್ವಸ್ಥಾ
ಬ್ರಿಟಿಷರ ದಂಡ ನಡೀತ ಹುಡಕೂತಾ ||
ಗೋರಾದಂಡ ಇಳದೀತ ಗೋದಳಿಗಿ ರಾತ್ರಿ ಹೊತ್ತ ಮುಳಗಿ
ರಾಯಣ್ಣಗಾತ ಗೊತ್ತಾ
ಮುಗಿ ಹಾಕಿದ್ರ ಆಗಲಿಲ್ಲಾ ಸುಸ್ತಾ ||
ಕಡಕಡದ ಒಗದ್ರ ಚಂಡ ರುಂಡ ಮುಗಿದ ಎಲ್ಲಾ ದಂಡ
ಒಬ್ಬನ್ನ ಬಿಟ್ರ ಬೇಕಂತಾ
ಸಾಹೇಬಗ ಸುದ್ದಿ ತಿಳಸಂತಾ ||
ಬ್ರಿಟಿಷರಿಗೆ ಬಿದ್ದಿತ ಬಾಳ ದಿಗಿಲ ಜಾಹೀರ ನಾಡಮ್ಯಾಲ
ಹಿಡಕೊಟ್ರ ಇನಾಮ ಐತಿ ಮಸ್ತಾ
ನೇಗಿನಾಳ ಖೋದಾನಪುರ ಗೌಡ್ರ ಹಿಡಕೊಡತೇವಂತಾ ||

ಗುಡ್ಡಗಂವಾರ ಹುಡುಕೂತ ನಡದಾರು
ರಾಯಣ್ಣನ ಭೆಟ್ಟಿ ಆದಾರು ||
ವಿಶ್ವಾಸಕೊಟ್ಟ ಮಾತನಾಡ್ಯಾರು
ರೊಟ್ಟಿಬುತ್ತಿ ನಿನಗ ತಂದೇವಂದಾರು ||
ಜಳಕಾ ಮಾಡೂದಕ ಕರಕೊಂಡ ನಡದಾರು
ಬಾಳಗುಂಡ ವರ್ತಿಗಿ ಇಳದಾರು ||
ಕತ್ತಿ ತಗದೊಗದ ಸಿಳ್ಳ ಹೊಡದಾರು
ಲಷ್ಕರ ಬಂದು ಸುತ್ಹಾಕಿ ಹಿಡಿದಾರು ||

ಧಾರವಾಡದಲ್ಲಿ ಚೌಕಶಿ ಮಾಡಿದಾರ ಬಾಳ ಗಾಸಿ
ರಾಯಣ್ಣನ ಗಲ್ಲಿಗ್ಹಾಕಿದಾರ ಓದ ನಂದಗಡಕ
ತಿಗಡೊಳ್ಳಿ ಮರಿಕಲ್ಲ ಮಾಡಿದಕವಿ ಬಲುಟೀಕ
ಬಲ್ಲಿದ ಬಲಭೀಮ ಆದಾನ ಅವನ ಸಾಯಕ್ಕ ||
ಜಾತಿಯಿಂದ ಹಾಲಮತ ಛಾತಿಲಿಂದ ಶಮರಂತ |
ಸೋತ ನಡಿಲಿಲ್ಲ ಪ್ರಾಣ ಹೋಗೋತನಕ
ಸಂಗೊಳ್ಳಿ ರಾಯಣ್ಣನಂತಾ ಬಂಟ ಇದ್ರ ಇರಬೇಕ ||
 








 

 

 

ಡೊಳ್ಳಿನ ಇತರ ಹಾಡುಗಳು

ಕುರುಬರು ನಾವು ಕುರುಬರು ನಾವು
ಕುರಿಗಳ ಮೇಯಿಸುವ ಕುರುಬರು
ಕುರಿಗಳ ಮೇಯಿಸುವ ಕುರುಬರು
ಮರೆಮೋಸಗಳರಿಯದ ಕುರುಬರು || ೧೪ ||

ಸುರಿಯುವ ಮಳೆಯಲಿ ನೆನೆಯುವ ಕುರುಬರು
ಕೊರೆಯುವ ಚಳಿಯಲಿ ಬಿರಿವವರು
ಕೊರೆಯುವ ಚಳಿಯಲಿ ಬಿರಿವವರು
ಉರಿ ಬಿಸಿಲಲಿ ಕರಿಯುವ ಧೀರರು  || ೧೫ ||

ಅಡವಿಯ ಹೊಡೆಹುಲ್ಲ ಮೇಯಿಸುವವರು
ಮಡುವಿನ ತಿಳಿನೀರ ಕುಡಿಸವರು
ಮಡುವಿನ ತಿಳಿನೀರ ಕುಡಿಸವರು
ಯಾರೊಡನೆ ಜಗಳ ಮಾಡದಂಥವರು       || ೧೬ ||

ಕಾಡಿನ ಬಂಟರು ಮುಗಿಲಿನ ನೆಂಟರು
ಹುಲಿ ಚಿರ್ಚಗಳನ್ನಿರಿಯುವವರು
ಹುಲಿ ಚರ್ಚಿಗಳನ್ನುರಿಯುವವರು
ತೋಳಗಳ ಬೆದರಿಸಿ ಅಟ್ಟುವವರು  || ೧೭||



ಕುರುಬರು ನೇಯುವ ಕರಿಕಂಬಳಿಯು
ಗುರುವಿನ ಗದ್ದುಗೆಗಿರಬೇಕು
ಗುರುವಿನ ಗದ್ದುಗೆಗಿರಬೇಕು ಶುಭ-
ಕಾರ್ಯಕೆ ಇದು ಬೇಕೇಬೇಕು        || ೨೩ ||

ಮದುವೆಯ ಹಂದರದೊಳಗೆ ಹಾಸಕ್ಕಿಯ
ಹೊಯ್ಯಲು ಕಂಬಳಿ ಇರಬೇಕು
ಹೊಯ್ಯಲು ಕಂಬಳಿ ಇರಬೇಕು ಒಕ್ಕಲಿಗರ
ಹೆಗಲಿಗೆ ಇದು ಬೇಕೇ ಬೇಕು        || ೨೪ ||

ಕುರುಬರ ಉಣಿಯ ನೂಲದು
ಯಂತ್ರಕೆ ಮಂತ್ರಕೆ ಇರಬೇಕು
ಯಂತ್ರಕೆ ಮಂತ್ರಕೆ ಇರಬೇಕು ಈ
ತಂತ್ರವ ಮೊದಲರಿತಿರಬೇಕು       || ೨೫ ||

ಗುದ್ದಲಿ ಪೂಜೆಗೆ ಕುರುಬರು ಬೇಕು
ಬಿತ್ತುವಾಗ ಕುರುಬರು ಬೇಕು
ಬಿತ್ತುವಾಗ ಕುರುಬರು ಬೇಕು
ಮತ್ತೆ ಉತ್ಸವಕ್ಕೆ ಡೊಳ್ಳಿರಬೇಕು    || ೨೬ ||

ಮೈಲಾರ ಮಹದೇವನ ಗೊರವರಿಗೆ
ಧರಿಸಲು ಕರಿ ಕಂಬಳಿ ಬೇಕು
ಧರಿಸಲು ಕರಿ ಕಂಬಳಿ ಬೇಕು
ಕೇಳಿದುವೇ ಅವರಿಗೆ ಹಿರಬದುಕು    || ೨೭ ||


ಕುರುಬರ ಬದಲು ಹಾಲುಮತದವರು
ಎನಿಸಲು ಮಾಡಿರಿ ಯತ್ನವನು
ಎನಿಸಲು ಮಾಡಿರಿ ಯತ್ನವನು
ಸಮಾಜ ಧುರೀಣರು ಅರಿತಿದನು    || ೩೭ ||

ಹಾಲುಮತ ಎಂಬ ಶಬ್ದವು ಎಂತಹ
ಸುಂದರವಿದೆಯೆಂದರಿತಿದನು
ಸುಂದರವಿದೆಯೆಂದರಿತಿದನು
ಲಗು ಬಳಕೆಗೆ ತರಲೆಂದೊರೆಯುವೆನು        || ೩೮ ||

ಕುರುಬರೆಂಬ ನುಡಿ ಮಾಜುವವರಿಗೆ
ಸತತ ಮಾಡಿರಿ ಪ್ರಯತ್ನವನು
ಸತತ ಮಾಡಿರಿ ಪ್ರಯತ್ನವನು
ಹೀಗಾದರೆ ಪಡೆವೆವು ಹಿರಿಮೆಯನು || ೩೯ ||

ಕಿರಿದರಲ್ಲಿ ಹಿರಿಯರ್ಥವನೊರೆಯುವ
ಸರಸ ಚರಿತೆಯನು ರಚಿಸಿದೆನು
ಸರಸ ಚರಿತೆಯನು ರಚಿಸಿದೆನು ಅನು-
ಸರಿಸಲು ಧನ್ಯನು ಆಗುವೆನು        || ೪೦ ||



ಇವರು ಕುರುಬರು ಇವು ಡೊಳ್ಳಿನ
ಹಾಡೆಂದು ಜರಿವ ಪಂಡಿತರನ್ನು
ಹಾಡೆಂದು ಜರಿವ ಪಂಡಿತರನ್ನು
ತಿರುಳರಿತು ನುಡಿಯಿರೆನ್ನುವ ನಾನು          || ೧೦ ||

ಸಕ್ಕರಿ ಕೇಸರಿ ಬೆರೆಯಿಸಿ ಕೊಟ್ಟರೆ
ಕುಡಿಯಲು ಆಕಳ ಹಾಲನ್ನು
ಕುಡಿಯಲು ಆಕಳ ಹಾಲನ್ನು
ಕರಿ ಆಕಳದಾಮಗುವರೇನು         || ೧೧ ||

ಜೇನು ತುಪ್ಪ ಹುಳದೆಂಜಲವಲ್ಲವೆ
ಮೆಲ್ಲುವರೇಕೆಲ್ಲರು ಅದನು
ಮೆಲ್ಲುವರೇಕೆಲ್ಲರು ಅದನು
ವಸ್ತುವಿನ ಗುಣಕೆ ಕೂಡಿ ಬೆಲೆಯನ್ನು || ೧೨ ||

ಇಲ್ಲಿ ಕೂಡಿರುವ ದೈವವೆ ದೇವರು
ಎಂದು ನಂಬಿ ಕೈಮುಗಿಯುವೆನು
ಎಂದು ನಂಬಿ ಕೈಮುಗಿಯುವೆನು
ತಮ್ಮಾಶೀರ್ವಾದ ಬೇಡುವೆನು      || ೧೩ ||